ಕೆತ್ತಲು ಮೀನು

	ಮಿಸ್ಟಸ್ ಎಂಬ ವೈಜ್ಞಾನಿಕ ಹೆಸರಿನ ಒಂದು ಮೀನು ಜಾತಿ. ಮೀಸೆ ಮೀನುಗಳ ಸಂಬಂಧಿ. ಉತ್ತರ ಭಾರತದ ನದಿ ಹಾಗೂ ಕೆರೆಕಟ್ಟೆಗಳಲ್ಲಿ ಇದನ್ನು ಕಾಣಬಹುದು. ಇದರ ದೇಹ ನೀಳ ಈಜುರೆಕ್ಕೆಗಳೆಲ್ಲ ಚಿಕ್ಕವು; ಬಾಲದ ಈಜುರೆಕ್ಕೆ ಎರಡಾಗಿ ಸೀಳಿದೆ. ಬಾಯ ಸುತ್ತಲೂ ನಾಲ್ಕು ಜೊತೆ ಮೀಸೆಗಳಿವೆ. ಕೆಲವು ಮೀನುಗಳಲ್ಲಿ ಮೀಸೆಗಳ ಒಂದು ಜೊತೆ ಬಾಲದ ವರೆಗೂ ಬೆಲೆದಿರುವುದುಂಟು. ಸಾಮಾನ್ಯವಾಗಿ ದೇಹದ ಬಣ್ಣ ಕಂದು ಮಿಶ್ರಿತ ಬಿಳಿ. ಕೆಲವು ಮೀನುಗಳಲ್ಲಿ ದೇಹದ ಮೇಲೆ ನೀಳವಾದ 8 ಪಟ್ಟೆಗಳಿವೆ. ಇವುಗಳಲ್ಲಿ ನಾಲ್ಕು ಕಪ್ಪು, ನಾಲ್ಕು ಬಿಳಿ. ಇವು ತಲೆಯ ಹಿಂಭಾಗದಿಂದ ಬಾಲದ ಈಜು ರೆಕ್ಕೆಯ ವರೆಗೆ ಒಂದಕ್ಕೊಂದು ಪರ್ಯಾಯವಾಗಿವೆ.

	ಕೀಟಗಳು ಹಾಗೂ ಬೇರೆ ಜಾತಿಯ ಮೀನುಮರಿಗಳು ಕೆತ್ತಲು ಮೀನಿನ ಆಹಾರ. ಏಪ್ರಿಲ್-ಜುಲೈ ತಿಂಗಳುಗಳ ನಡುವಣ ಕಾಲ ಇದರ ಸಂತಾನೋತ್ಪತ್ತಿಯ ಅವಧಿ.
(ನೋಡಿ- ಮೀಸೆಮೀನು)					
	(ಎಂ.ಜೆ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ